March 25, 2026

ಸುರತ್ಕಲ್ : ಇಬ್ಬರ ಮೇಲೆ ಕತ್ತಿ ಬೀಸಿ ಹಲ್ಲೆ – ಬಸ್ಸಿಗೆ ಕಲ್ಲು ತೂರಾಟ

0
IMG-20220819-WA0043

ಸುರತ್ಕಲ್: ಇಲ್ಲಿನ ಕಾನಾ ಸಮೀಪ ವ್ಯಕ್ತಿಯೊಬ್ಬ ಕತ್ತಿಯಿಂದ ಇಬ್ಬರಿಗೆ ಗಾಯಗೊಳಿಸಿದ್ದಲ್ಲದೆ, ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಗಾಯಗೊಂಡವರನ್ನು ಹಾಗೂ ಕತ್ತಿ ಬೀಸಿದ ವ್ಯಕ್ತಿಗೂ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ತನಿಖೆ ಆರಂಭಿಸಿದ್ದು, ಆರೋಪಿಯು ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ತಿಳಿದು ಬಂದಿದೆ. ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!