ವಿಟ್ಲ: ಬೆಂಗಳೂರು ನೋಂದಣಿಯ ಕಾರು ಪತ್ತೆ: ಕಾರನ್ನು ವಶಕ್ಕೆ ಪಡೆದ ಪೊಲೀಸರು
ವಿಟ್ಲ: ಬೆಂಗಳೂರು ನೋಂದಣಿಯ ಕಾರೊಂದು ಪತ್ತೆಯಾದ ಘಟನೆ ಅನಂತಾಡಿಯ ಕೊಬ್ರಿಮಠ ಎಂಬಲ್ಲಿ ನಡೆದಿದೆ.
ಎರಡು ದಿನಗಳಿಂದ ಅದೇ ಸ್ಥಳದಲ್ಲಿ ನಿಂತಿದ್ದು, ಕಾರು ಹಾಳಾಗಿ ನಿಂತಿದಿಯೋ ಅಥವಾ ಕಳವು ಇನ್ನಿತರ ಅಪರಾಧ ಪ್ರಕರಣದಲ್ಲಿ ಭಾಗಿಯಾದ ಕಾರೋ ಎಂದು ತನಿಖೆಯಿಂದ ತಿಳಿಯಬೇಕಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.




