ಉಡುಪಿ: ಸೇತುವೆಯ ಮೇಲೆ ಬೈಕ್ ಪತ್ತೆ: ಆತ್ಮಹತ್ಯೆ ಶಂಕೆ
ಉಡುಪಿ: ಉಡುಪಿಯ ಬ್ರಹ್ಮಾವರದ ಮಾಬುಕಳ ಸೇತುವೆಯ ಮೇಲೆ ಬೈಕೊಂದು ಪತ್ತೆಯಾಗಿದ್ದು, ಬೈಕನ್ನು ಸೇತುವೆಯ ಮೇಲೆ ನಿಲ್ಲಿಸಿದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ಕೊಡಂಕೂರು ನಿವಾಸಿ ಅಶೋಕ್ ಸುವರ್ಣ ಎಂಬವರಿಗೆ ಸೇರಿದ ಬೈಕ್ ಇದಾಗಿದ್ದು, ಬೈಕ್ ನದಿಯ ಮೇಲೆ ಇಟ್ಟು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಶೋಕ್ 20 ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೆಚ್ಚಿನ ತನಿಖೆಯಿಂದ ತಿಳಿದುಬಂದಿದ್ದು, ಕೊಡಂಕೂರಿನ ಅಶೋಕ್ ಸುವರ್ಣ ಅವರ ಮನೆಯಲ್ಲಿ ಬ್ರಹ್ಮಾವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಈ ಸಂಬಂಧ ಅಶೋಕ್ ಸುವರ್ಣ ಅವರ ಕುಟುಂಬಸ್ಥರು ಉಡುಪಿ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ಮಾಬುಕಳ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.




