March 25, 2026

ಕಾರಾಗೃಹದಲ್ಲಿರುವ ಕೈದಿಗೆ ಚಿಕನ್‌ ಪೀಸ್‌ನಲ್ಲಿ ಗಾಂಜಾ ಅಡಗಿಸಿಟ್ಟು ಪೂರೈಕೆ: ಪತ್ತೆ ಹಚ್ಚಿದ ಪೊಲೀಸರು

0
image_editor_output_image-1575136242-1660380213107.jpg

ವಿಜಯಪುರ: ಇಲ್ಲಿನ ದರ್ಗಾ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗೆ ಚಿಕನ್‌ ಪೀಸ್‌ನಲ್ಲಿ ಗಾಂಜಾ ಅಡಗಿಸಿಟ್ಟು ಪೂರೈಕೆ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಜೈಲಿನಲ್ಲಿರುವ ಕೈದಿಗೆ ನೀಡಲು ತೆಗೆದುಕೊಂಡು ಹೋಗಿದ್ದ ಊಟವನ್ನು ಪರಿಶೀಲಿಸುವಾಗ ಚಿಕನ್ ಪೀಸ್ ಒಳಗೆ ಗಾಂಜಾವನ್ನು ಹುದುಗಿಸಿಟ್ಟಿರುವುದು ಪತ್ತೆಯಾಗಿದೆ.

ಕೈದಿ ಶಾರುಕ್ ಖಾನ್ ತೊಗರಿತಿಪ್ಪಿ ಎಂಬಾತನಿಗೆ ಪ್ರಜ್ವಲ್ ಎಂಬಾತ ಊಟದೊಂದಿಗೆ ಗಾಂಜಾ ಪೂರೈಕೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ.

ದೊಡ್ಡ, ದೊಡ್ಡ ಚಿಕನ್ ಪೀಸ್‌ನಲ್ಲಿ 2 ಗ್ರಾಂನಷ್ಟು ಇರುವ ಗಾಂಜಾ ಇರಿಸಲಾಗಿತ್ತು. ಒಟ್ಟು 18 ಗಾಂಜಾ ಪ್ಯಾಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ವಿರುದ್ಧ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!