ಮಹಿಳೆಯ ಮೇಲೆ ಹಲ್ಲೆ: ಬುಲ್ಡೋಜರ್ ಮೂಲಕ ಬಿಜೆಪಿ ಮುಖಂಡನ ಮನೆ ನೆಲಸಮ
ನವದೆಹಲಿ: ಕಳೆದ ವಾರ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ರಾಜಕಾರಣಿಯೊಬ್ಬರ ಅನಧಿಕೃತ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ನೋಯ್ಡಾದ ಹೌಸಿಂಗ್ ಸೊಸೈಟಿಯ ಮಹಿಳೆಯೊಬ್ಬರ ಮೇಲೆ ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಶ್ರೀಕಾಂತ್ ತ್ಯಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿತ್ತು. ಈ ಬಗ್ಗೆ ತ್ಯಾಗಿ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸೊಸೈಟಿಯ ಆವರಣದಲ್ಲಿ ತಾಳೆ ಮರ ನೆಡುವ ವಿಚಾರದಲ್ಲಿ ರೆಸಿಡೆನ್ಶಿಯಲ್ ಸೊಸೈಟಿಯ ನಿವಾಸಿ ಮಹಿಳೆಯೊಬ್ಬರ ಮೇಲೆ ತ್ಯಾಗಿ ಹಲ್ಲೆ ನಡೆಸಿರುವುದಾಗಿ ವರದಿ ತಿಳಿಸಿದೆ. ಎಫ್ ಐಆರ್ ದಾಖಲಾದ ನಂತರ ತ್ಯಾಗಿ ತಲೆ ಮರೆಸಿಕೊಂಡಿದ್ದ.




