August 25, 2026

ಪಾಕಿಸ್ತಾನದ ಇಮ್ರಾನ್ ಖಾನ್ ಪಕ್ಷಕ್ಕೆ ಮಂಗಳೂರಿನ ಉದ್ಯಮಿ ರೊಮಿತಾ ಶೆಟ್ಟಿ 13,750 ಡಾಲರ್ ದೇಣಿಗೆ

0
image_editor_output_image1414424365-1659763494362.jpg

ನವದೆಹಲಿ: ಪಾಕಿಸ್ತಾನದ ಚುನಾವಣಾ ಆಯೋಗವೂ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ)ಪಕ್ಷಕ್ಕೆ ಸಂದಾಯದವಾದ ದೇಣಿಗೆಯ ವಿವರವನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವು ಭಾರತೀಯರ ಹೆಸರು ತಳುಕು ಹಾಕಿಕೊಂಡಿದೆ.

ಈ ಪೈಕಿ ಮಂಗಳೂರು ಮೂಲದ ಅಮೆರಿಕಾ ಉದ್ಯಮಿ ರೊಮಿತಾ ಶೆಟ್ಟಿ ಎಂಬವರು ನೀಡಿದ 13,750 ಡಾಲರ್ ಹಣ. ಅಂದರೆ ಪಾಕಿಸ್ತಾನ ಕರೆನ್ಸಿಯಲ್ಲಿ೩೦.೮೫ ಲಕ್ಷ ರೂಪಾಯಿಯನ್ನೂ ಅಕ್ರಮ ದೇಣಿಗೆ ಎಂದು ಘೋಷಿಸಿದೆ.

ರೊಮಿತಾ ಶೆಟ್ಟಿ ಅವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ನೆಟ್ಟಿಗರು ಸೋಶಿಯಲ್ ಮೀಡಿಯಾ ಹಾಗೂ ಗೂಗಲ್ ಸರ್ಚ್ ಪೇಜ್ ನಲ್ಲಿ ಅವರ ಬಗ್ಗೆ ಹುಟುಕಾಟ ನಡೆಸಿದ್ದಾರೆ.

ಮಂಗಳೂರು ಮೂಲದ ರೊಮಿತಾ ಶೆಟ್ಟಿ , ಪಾಕಿಸ್ತಾನ ಮೂಲದ ಅಮೆರಿಕನ್ ವ್ಯಕ್ತಿ, ಉದ್ಯಮಿ ನಜೀರ್ ಅಜೀಜ್ ಅಹ್ಮದ್ ಎಂಬವರ ಪತ್ನಿಯಾಗಿದ್ದಾರೆ.

ಅಮೆರಿಕಾಗದ ನ್ಯೂಯಾರ್ಕ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಡಿಮಿಯಾವೊ ಅಹ್ಮದ್ ಕ್ಯಾಪಿಟಲ್ ಎಲ್ ಎಲ್ ಎಲ್(ಡಿಎ ಕ್ಯಾಪಿಟಲ್) ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಕೊಲಂಬಿಯಾ ವಿಶ್ವವಿದ್ಯಾಲಯದ ಗ್ಲೋಬಲ್ ಥಾಟ್ ವಿಭಾಗದ ಸಲಹೆಗಾರ್ತಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬ್ಲೂಮ್ ಬರ್ಗ್ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!