August 25, 2026

ಸರ್ಕಾರಿ ಕ್ಲರ್ಕ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ: ಹಣ ಪತ್ತೆಯಾಗುತ್ತಿದ್ದಂತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

0
image_editor_output_image-1739096530-1659594424618.jpg

ಭೋಪಾಲ್ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಮಧ್ಯಪ್ರದೇಶದ ಸರ್ಕಾರಿ ಗುಮಾಸ್ತ ಮನೆಗೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಗಿದೆ ಅಲ್ಲದೆ ಹಣ ಪತ್ತೆಯಾಗುತ್ತಿದ್ದಂತೆ ಗುಮಾಸ್ತ ವಿಷ ಕುಡಿಯುವ ನಾಟಕವಾಡಿದ್ದಾನೆ.

ಭೋಪಾಲ್ ನ ಭೈರಾಗಾರ್ ಪ್ರದೇಶದಲ್ಲಿರುವ ಕ್ಲರ್ಕ್ ಹೀರೊ ಕೆಸ್ವಾನಿ ಎಂಬ ವ್ಯಕ್ತಿ ಭೋಪಾಲ್ ನ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸಮಾಡುತಿದ್ದಾನೆ, ಆತ ತಿಂಗಳಿಗೆ 50,000ರೂ. ವೇತನ ಪಡೆಯುತ್ತಿದ್ದಾನೆ.

ಬುಧವಾರ ಹೀರೊ ಕೆಸ್ವಾನಿ ಮನೆಯಲ್ಲಿ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಹೊಂದಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುಮಾಸ್ತನ ಮನೆಗೆ ದಾಳಿ ನಡೆಸಿದ್ದಾರೆ, ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸುವ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದ್ದು ಸುಮಾರು 85 ಲಕ್ಷ ರೂ ಪತ್ತೆಯಾಗಿದೆ.

ಅಲ್ಲದೆ ಮನೆಯಲ್ಲಿ ಶೋಧ ನಡೆಸುವಾಗ, ಕೋಟಿ ಮೌಲ್ಯದ ಆಸ್ತಿಯ ದಾಖಲೆ ಪತ್ರಗಳು ಕೂಡ ಲಭ್ಯವಾಗಿದೆ. ಇದರಿಂದ ಭೀತಿಗೊಳಗಾದ ಗುಮಾಸ್ತ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದಾನೆ ಅಲ್ಲದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ, ಆದರೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ ಇದರಿಂದ ಹೆದರಿದ ನೌಕರ ಫಿನಾಯಿಲ್ ಕುಡಿದು ಅಸ್ವಸ್ಥಗೊಂಡಿದ್ದಾನೆ.

ಸದ್ಯ ಗುಮಾಸ್ತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾನೆ, ಪೊಲೀಸ್ ಅಧಿಕಾರಿಗಳು ಹೀರೊ ಕೆಸ್ವಾನಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!