September 20, 2024

ಕಾರ್ಕಳ: ಸೈಜುಕಲ್ಲುಗಳನ್ನು ಅನ್ ಲೋಡ್ ಮಾಡುವಾಗ ಟಿಪ್ಪರ್ ಪಲ್ಟಿ, ಚಾಲಕ ಆಸೀಫ್ ಮೃತ್ಯು

0

ಕಾರ್ಕಳ: ಟಿಪ್ಪರ್ ನಿಂದ ಸೈಜುಕಲ್ಲುಗಳನ್ನು ಅನ್ ಲೋಡ್ ಮಾಡುವಾಗ 40 ಅಡಿ ಎತ್ತರದಿಂದ ಕೆಳಗೆ ಮಗುಚಿ ಬಿದ್ದು, ಚಾಲಕ ಆಸೀಪ್ ಮೃತ ಪಟ್ಟಿರುವ ಘಟನೆ ಮಂಗಳವಾರದಂದು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕಾರ್ಕಳ ತಾಲೂಕು ಸೂಡ ಗ್ರಾಮದ ಸೂಡ ಎಂಬಲ್ಲಿ ಸುರೇಶ್ ಶೆಟ್ಟಿ ಎಂಬುವವರ ಮಾಲಕತ್ವದ ಪ್ರಸ್ತುತ ಕೇರಳ ವಾಸಿ ಬಾಸಿತ್ ಎಂಬುವವರು ಲೀಸ್ ಗೆ ಪಡೆದುಕೊಂಡಿರುವ ಓಂ ಕ್ರಶರ್ ನಲ್ಲಿ ಟಿಪ್ಪರ್ ಚಾಲಕನಾಗಿ ಆಸೀಫ್ ಕೆಲಸ ಮಾಡಿಕೊಂಡಿದ್ದರು.

ಎಂದಿನಂತೆ ಮಂಗಳವಾರ ಕಲ್ಲು ಕೋರೆಯಿಂದ ಸೈಜು ಕಲ್ಲುಗಳನ್ನು ಟಿಪ್ಪರ್ ನಲ್ಲಿ ತಂದು ಓಂ ಕ್ರಶರ್ ನಲ್ಲಿ ಹಾಕುವಾಗ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!