ರೈಲು ನಿಲ್ದಾಣದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿತ: ಮೂವರ ಸ್ಥಿತಿ ಗಂಭೀರ, 8 ಮಂದಿ ಕಾರ್ಮಿಕರಿಗೆ ಗಾಯ
ಅಸ್ಸಾಂ : ಅಸ್ಸಾಂನ ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಕನಿಷ್ಠ ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ರೈಲು ನಿಲ್ದಾಣದಲ್ಲಿ ಓವರ್‌ಹೆಡ್ ಶೆಡ್‌ನ ಕೆಳಗೆ ಕೂಲಿಕಾರ್ಮಿಕರ ಗುಂಪೊಂದು ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಬೊಂಗೈಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ ತಿಳಿಸಿದ್ದಾರೆ.




