December 15, 2025

ಭಾರೀ ಮಳೆ ಹಿನ್ನೆಲೆ: ದ.ಕ ಜಿಲ್ಲೆಯ ಎರಡು ತಾಲೂಕಿನ ಶಾಲಾ-ಕಾಲೇಜ್ ಗಳಿಗೆ ರಜೆ ಘೋಷಣೆ

0
image_editor_output_image-317098084-1659408351830

ದ.ಕ ಜಿಲ್ಲೆಯ ವಿವಿಧ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಸುಬ್ರಹ್ಮಣ್ಯ ಕಲ್ಮಕಾರು , ಕೊಲ್ಲ ಮೊಗ್ರು , ಹರಿಹರ , ಬಾಳುಗೋಡು ಐನಕಿದು ಗ್ರಾಮದಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಜಳಪ್ರಳಯವೇ ಸಂಭವಿಸಿದೆ.

ಭಾರೀ ಮಳೆ ಮುಂದುವರಿದಿದ್ದು, ನದಿ , ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸುಳ್ಯ ಹಾಗೂ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜು ಗಳಿಗೆ ಆ. 2 ರಂದು ಜಿಲ್ಲಾಧಿಕಾರಿ ಡಾ. ಕೆವಿ . ರಾಜೇಂದ್ರ ರಜೆ ಘೋಷಣೆ ಮಾಡಿದ್ದಾರೆ.

ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದ್ದು, ಭಾರೀ ಮಳೆಯಿಂದ ದರ್ಪಣ ತೀರ್ಥ ನದಿ, ಆದಿ ಸುಬ್ರಹ್ಮಣ್ಯ ಕ್ಷೇತ್ರದ ಒಳಗೆ ಪ್ರವೇಶಿತು.


ಮಳೆಯ ಭೀಕರತೆಗೆ ಕಲ್ಮಕಾರು , ಕೊಲ್ಲ ಮೊಗ್ರು , ಹರಿಹರ , ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

Leave a Reply

Your email address will not be published. Required fields are marked *

error: Content is protected !!