August 22, 2026

ವಿದ್ಯುತ್ ಶಾಕ್: ಪಿಕಪ್ ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಸಜೀವ ದಹನ

0
image_editor_output_image1213526001-1659341004983.jpg

ಕೂಚ್ ಬೆಹಾರ್: ಡಿಜೆ ಸೆಟ್ ಗೆ ಹಾಕಿದ್ದ ಜನರೇಟರ್ ನಲ್ಲಿ ವೈರಿಂಗ್ ಸಮಸ್ಯೆಯಿಂದಾಗಿ ಉಂಟಾದ ವಿದ್ಯುತ್ ಶಾಕ್ ನಿಂದ ಪಿಕಪ್ ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ದಾರುಣ ವಾಗಿ ಸಜೀವ ದಹನವಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಜಲ್ಪೇಶ್ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ವಿದ್ಯುತ್ ಪ್ರವಹಿಸಿದೆ.

ಘಟನೆಗೆ ಜನರೇಟರ್ನ ವೈರಿಂಗ್ ಸಮಸ್ಯೆ ಕಾರಣ ಎಂದು ಶಂಕಿಸಲಾಗಿದೆ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು. ಮಳೆಯಿಂದಾಗಿ ಜನರೇಟರ್ ಗೆ ನೀರು ನುಗ್ಗಿ ವೈರಿಂಗ್ ಸಮಸ್ಯೆ ಉಂಟಾಗಿರಬಹುದು’ ಎಂದು ಮಾತಭಂಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.

Leave a Reply

Your email address will not be published. Required fields are marked *

You may have missed

error: Content is protected !!