July 6, 2026

ಕೋಟೇಶ್ವರ: ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಅಡ್ಡಿ

0
image_editor_output_image102048917-1659332328240.jpg

ಕುಂದಾಪುರ: ಕೋಟೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ಕೈ ಎಂಬಲ್ಲಿ ಭಾನುವಾರದಂದು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಮೂವರು ಯುವಕರು ಅಡ್ಡಿಪಡಿಸಿರುವ ಘಟನೆ ನಡೆದಿದೆ.

ಕೋಟ ಪೊಲೀಸ್ ಠಾಣೆ ಮಧು ಬಿ.ಇ, ಠಾಣೆ ಸಬ್ ಇನ್ಸ್ ಪೆಕ್ಟರ್ ತಮ್ಮ ಸಿಬ್ಬಂದಿಯೊಂದಿಗೆ ಮೂರ್ಕೈಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ಈ ವೇಳೆ ಸಾಲಿಗ್ರಾಮ ಕಡೆಯಿಂದ ಸ್ಕೂಟಿ ಬಂದಿದ್ದು, ಅದರಲ್ಲಿ ಅಪ್ರಾಪ್ತರಂತೆ ಕಾಣುವ ಮೂವರು ಯುವಕರು ಕುಳಿತಿದ್ದರು.

ಇನ್ನು ಯುವಕರು ಹೆಲ್ಮೆಟ್ ಧರಿಸದೇ ಅತಿವೇಗದಲ್ಲಿ ಬರುತ್ತಿದ್ದರಿಂದ ಪೊಲೀಸರು ಸ್ಕೂಟಿಯನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಅವರು ಪೊಲೀಸರನ್ನು ನಿರ್ಲಕ್ಷಿಸಿ ಅತೀ ವೇಗವಾಗಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾರೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!