March 25, 2026

ದಾಖಲೆ ಇಲ್ಲದೆ ಮಂಗಳೂರಿನಿಂದ ಕಾಸರಗೋಡಿಗೆ ಹಣ ಸಾಗಾಟ: 36.47 ಲಕ್ಷ ರೂ. ಹಣ ಜಪ್ತಿ.

0
image_editor_output_image1055310322-1659086357231.jpg

ಕಾಸರಗೋಡು: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆ.ಎಸ್.ಆರ್ .ಟಿ.ಸಿ ಬಸ್ಸಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ36.47 ಲಕ್ಷ ರೂ. ನಗದನ್ನು ಜು .29 ರ ಮುಂಜಾನೆ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು , ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ಮಹಾರಾಷ್ಟ್ರ ಸಾಂಗ್ಲಿಯ ಗೋಪಾಲ್ ಎಂದು ಗುರುತಿಸಲಾಗಿದೆ. ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ.

ಕಾಸರಗೋಡಿನ ಜುವೆಲ್ಲರಿಯೊಂದಕ್ಕೆ ಒಪ್ಪಿಸಲು ಈ ಹಣ ತಂದಿದ್ದಾಗಿ ಈತ ವಿಚಾರಣೆ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಈತ ನಿರಂತರ ಹವಾಲ ಹಣ ಸಾಗಾಟ ಮಾಡುತ್ತಿದ್ದುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!