March 26, 2026

ವಿಟ್ಲ: ಪೇಟೆ ಸಂಪೂರ್ಣ ಬಂದ್: ಬೆರಳೆಣಿಕೆಯಷ್ಟು ಬಸ್ ಗಳ ಸಂಚಾರ

0
IMG-20220727-WA0074.jpg

ವಿಟ್ಲ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಹಿನ್ನೆಲೆ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ವಿಟ್ಲ ಪೇಟೆಯಲ್ಲಿನ ಹಿಂದೂ ಸಮುದಾಯದ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಅದರಂತೆ ವಿಟ್ಲಪೇಟೆಯ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿದೆ.

ಸರಕಾರಿ ಹಾಗೂ ಕೆಲವು ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಬಸ್ ಗಳು ಮಾತ್ರ ಸಂಚಾರ ಮಾಡುತ್ತಿದೆ.

ಬೆಳಿಗ್ಗೆ ಹಿಂದು ಸಮುದಾಯದ ಅಂಗಡಿ ಮಾತ್ರ ಬಂದ್ ಮಾಡಲಾಗಿತ್ತು. ಇದೀಗ ಅನ್ಯ ಸಮುದಾಯ ಅಂಗಡಿಗಳು ಕೂಡಾ ಬಂದ್ ಆಗಿದೆ. ಇನ್ನೂ ಅಗತ್ಯ ವಸ್ತುಗಳಾದ ಮೆಡಿಕಲ್ ಎಂದಿನಂತೆ ವ್ಯಾಪಾರ ಮಾಡುತ್ತಿದೆ. ಪೇಟೆಯಲ್ಲಿ ಜನರ ಸಂಖ್ಯೆಯೂ ಕಡಿಮೆಯಾಗಿದೆ. ಆಟೋ ರಿಕ್ಷಾ, ಕಾರು ಸಂಚಾರ ಸ್ಥಗಿತಗೊಳಿಸಿದೆ. ವಿಟ್ಲ ಪೊಲೀಸರು ಬಿಗೀ ಬಂದೋ ಬಸ್ತ್ ಏರ್ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!