ಪುತ್ತೂರು: ಬಿಜೆಪಿ ಮುಖಂಡನ ಕೊಲೆ ಹಿನ್ನೆಲೆ: ಆಸ್ಪತ್ರೆ ಮುಂಭಾಗ ಧರಣಿ ಕುಳಿತ ಕಾರ್ಯಕರ್ತರು-ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯ
ಪುತ್ತೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ರವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ಹಿನ್ನೆಲೆ ಪುತ್ತೂರಿನಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
10.20 ಸುಮಾರಿಗೆ ಪುತ್ತೂರು ಪೇಟೆ ಬಂದ್ ಆಗಿದ್ದು, ಪೇಟೆಯಲ್ಲೆಲ್ಲಾ ಖಾಕಿ ಕಣ್ಗಾವಲು ತೀವ್ರವಾಗಿದೆ.
ಪ್ರವೀಣ್ ಹತ್ಯೆಯಾದ ಹಿನ್ನೆಲೆ ಆಸ್ಪತ್ರೆಯ ಮುಂಭಾಗ ಹಿಂದೂ ಸಂಘಟನೆ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ರವರ ಮೃತದೇಹವು ಈಗಾಗಲೇ ಪ್ರಗತಿ ಆಸ್ಪತ್ರೆಯಲ್ಲಿದ್ದು,ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ದವಾದ ಬೆನ್ನಲ್ಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿ ಹಿಂದೂ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಧರಣಿ ಕುಳಿತಿದ್ದಾರೆ.





