ICYM ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾಗಿ ವಕೀಲ ಅನಿಲ್ ಜಾನ್ ಸಿಕ್ವೇರಾ ಬರಿಮಾರ್ ಆಯ್ಕೆ
ಮಂಗಳೂರು: ಭಾರತೀಯ ಕಥೋಲಿಕ್ ಯುವ ಸಂಚಲನದ ವಾರ್ಷಿಕ ಸಭೆ ಮಂಗಳೂರು ನಗರದ ರೊಸಾರಿಯೋ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗೆ ಮಂಗಳೂರು ಧರ್ಮ ಪ್ರಾಂತ್ಯದ ವ್ಯಾಪ್ತಿಗೆ ಒಳಪಡುವ ಸುಮಾರು 120ಕ್ಕೂ ಹೆಚ್ಚು ಚರ್ಚ್‌ನ ಯುವಜನರು ಪಾಲ್ಗೊಂಡಿದ್ದರು.

ಪೂರ್ವಾಹ್ನ ICYMನ ವಾರ್ಷಿಕ ಸಭೆ ನಡೆಯಿತು. ಈ ಸಭೆಯ ಬಳಿಕ ICYMನ 2022-23ನೇ ವರ್ಷದ ಪದಾಧಿಕಾರಿಗಳ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಅನಿಲ್ ಜಾನ್ ಸಿಕ್ವೇರಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಅಡ್ವಕೇಟ್ ಅನಿಲ್ ಜಾನ್ ಸಿಕ್ವೇರಾ ಇವರು ಬರಿಮಾರು ಗ್ರಾಮದ ನಿವಾಸಿ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಜೋಸೇಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು, ಸೂರಿಕುಮೇರಿನಲ್ಲಿ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಕರ್ನಾಟಕ ಪ್ರೌಢಶಾಲೆ ಮಾಣಿ ಪಡೆದರು. ಪಿಯುಸಿ ಶಿಕ್ಷಣವನ್ನು ಪುತ್ತೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿ, ಕಾನೂನು ಶಿಕ್ಷಣವನ್ನು ಮಂಗಳೂರಿನ SDM ಕಾನೂನು ಮಹಾ ವಿದ್ಯಾಲಯದಲ್ಲಿ ಪೂರೈಸಿದ್ದಾರೆ.
ಅನಿಲ್ ಜಾನ್ ಸಿಕ್ವೇರಾ ಇದಕ್ಕೂ ಮುನ್ನ ಸೂರಿಕುಮೇರಿನಲ್ಲಿರುವ ಬೊರಿಮಾರ್ ಚರ್ಚ್‌ನ YCS ಹಾಗೂ ICYM ಘಟಕದ ಅಧ್ಯಕ್ಷರಾಗಿ, ಮೊಗರ್ನಾಡು ವಲಯದ YCS ಹಾಗೂ ICYMನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಮಂಗಳೂರು ಧರ್ಮ ಪ್ರಾಂತ್ಯದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ಭರ್ಜರಿಯಾಗಿ ಗೆಲುವಿನೊಂದಿಗೆ ICYM ಮಂಗಳೂರು ಕೆಂದ್ರೀಯ ಸಮಿತಿಯ ಖಜಾಂಜಿಯಾಗಿ ಆಯ್ಕೆಯಾಗಿದ್ದರು.




