March 26, 2026

ಸರ್ಕಾರಿ ಬಾಲಕಿಯರ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ: ಮೊಬೈಲ್ ಫೋನ್ ಗಳು ಸ್ವಿಚ್ ಆಫ್, ಪ್ರಕರಣ ದಾಖಲು

0
image_editor_output_image1340549030-1658739019070.jpg

ರಾಯಚೂರು: ನಗರದ ಸರ್ಕಾರಿ ಬಾಲಕಿಯರ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹುಡುಗಿಯರು ಶನಿವಾರ ಕಾಲೇಜಿಗೆ ಆಗಮಿಸಿದ್ದು, ಮರಳಿ ಮನೆಗೆ ಹೋಗಿಲ್ಲ. ನಾಲ್ವರು ಇನ್ನೂ ಮೈನರ್ ಆಗಿದ್ದು, ಎಲ್ಲರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಬರುತ್ತಿವೆ.

ಘಟನೆಯಿಂದ ಪಾಲಕರು ಆತಂಕಗೊಂಡಿದ್ದು, ಕಾಲೇಜಿನಲ್ಲೂ ಬಿಗುವಿನ ವಾತಾವರಣವಿದೆ. ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!