August 25, 2026

ಸಹಕಾರಿ ಬ್ಯಾಂಕ್‌ ಬಳಿಯ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

0
image_editor_output_image-1383357116-1658556908558.jpg

ಕುಷ್ಟಗಿ: ತಾವರಗೇರಾ ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ಪಟ್ಟಣ ಸಹಕಾರ ಬ್ಯಾಂಕ್‌ ಬಳಿ ಚರಂಡಿಯಲ್ಲಿ ಶನಿವಾರ ನವಜಾತ ಶಿಶುವಿನ ಕಳೆಬರ ಪತ್ತೆಯಾಗಿರುವ ಅವಮಾನವೀಯ ಘಟನೆ ನಡೆದಿದೆ.

ಚರಂಡಿಯಲ್ಲಿ ಮೃತ ನವಜಾತ ಶಿಶು ಹೊಕ್ಕಳು ಬಳ್ಳಿ ಸಮೇತ  ತೇಲುತ್ತಿರುವುದು ಕಂಡು ಬಂದಾಗ ಜನ ಆತಂಕಕ್ಕಿಡಾಗಿದ್ದಾರೆ. ಕೂಡಲೇ ಪೊಲೀಸರಿಗೆ ಹಾಗೂ ಪುರಸಭೆಗೆ ಮಾಹಿತಿ ನೀಡಿದ್ದಾರೆ.

ಸುಮಾರು ನಾಲ್ಕೈದು ತಿಂಗಳ ಶಿಶುವಾಗಿದ್ದು, ಹೆಣ್ಣು ಅಥವಾ ಗಂಡು ಎನ್ನುವ ರೂಪ ಮೂಡಿಲ್ಲ. ಅವಧಿ ಪೂರ್ವವೇ ಹೆರಿಗೆ‌ ಮಾಡಿಸಿ ಚರಂಡಿಯಲ್ಲಿ ಎಸೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!