ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ: ರಾಜ್ಯ ಉದ್ಘಾಟನಾ ಸಮಾರಂಭ ಜುಲೈ 25 ಕ್ಕೆ ಗಂಗಾವತಿಯಲ್ಲಿ
ಬೆಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ 2022-23 ನೇ ಸಾಲಿನ ಸದಸ್ಯತ್ವ ಅಭಿಯಾನವು ಜುಲೈ 25 ರಿಂದ ಪ್ರಾರಂಭಗೊಳ್ಳಲಿದೆ ಹಾಗೂ ರಾಜ್ಯ ಉದ್ಘಾಟನಾ ಸಮಾರಂಭವು ಜುಲೈ 25 ರಂದು ಗಂಗಾವತಿಯಲ್ಲಿ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ತೀರ್ಮಾನಿಸಿದೆ.


“ನಮ್ಮ ಶಿಕ್ಷಣ, ಹಕ್ಕು, ಹೋರಾಟ” ಎಂಬ ಘೋಷವಾಕ್ಯದಡಿ ಈ ಬಾರಿಯ ಸದಸ್ಯತ್ವ ಅಭಿಯಾನ ನಡೆಸಲಿದ್ದು, ರಾಜ್ಯಾದ್ಯಂತ ಜುಲೈ 25 ರಿಂದ ಆಗಸ್ಟ್ 30 ರವರೆಗೆ ಅಭಿಯಾನ ನಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವ ನಿರೀಕ್ಷೆಯಿದೆ. ಕ್ಯಾಂಪಸ್ ಫ್ರಂಟ್ 13 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ,ಸಾಮಾಜಿಕ ಪಿಡುಕುಗಳ ನಿರ್ಮೂಲನೆಗಾಗಿ, ವಿದ್ಯಾರ್ಥಿಗಳ ಹಕ್ಕುಗಳ ಸಂರಕ್ಷಣೆಗಾಗಿ, ಸಮಾಜದಲ್ಲಿ ಪ್ರಭುತ್ವವು ನಡೆಸುತ್ತಿರುವ ಅನ್ಯಾಯಗಳ ವಿರುಧ್ದದ ಹೋರಾಟದಲ್ಲಿ ರಾಜ್ಯದಲ್ಲಿ ಜವಾಬ್ದಾರಿಯುತ ವಿದ್ಯಾರ್ಥಿ ಸಂಘಟನೆಯಾಗಿ ಮುಂಚೂಣಿಯಲ್ಲಿದೆ.
ಶೈಕ್ಷಣಿಕ ವಲಯಗಳಲ್ಲಿ ವಿದ್ಯಾರ್ಥಿಗಳು ಸಾಧನೆಗೈಯಲು ಅವರಿಗೆ ಬೇಕಾದ ಎಲ್ಲಾ ರೀತಿಯ ಪ್ರೋತ್ಸಾಹಗಳು ನೀಡುತ್ತಿದ್ದು ಅದರೊಂದಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳು, ದೇಶದ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವವರ ವಿರುಧ್ದ ರಾಜಿರಹಿತ ಹೋರಾಟ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಮುಂದಿಡುವ ಆಶಯವಾಗಿದೆ. ಈ ನಿಟ್ಟಿನಲ್ಲಿ “ನಮ್ಮ ಶಿಕ್ಷಣ, ಹಕ್ಕು, ಹೋರಾಟ” ಘೋಷವಾಕ್ಯದಡಿ ಈ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯ ಮುಖಾಂತರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ:
ಸರ್ಫರಾಝ್ ಗಂಗಾವತಿ ( ರಾಜ್ಯ ಕಾರ್ಯದರ್ಶಿ, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಹಸನ್ ಸಿರಾಜ್ ( ರಾಜ್ಯ ಸಮಿತಿ ಸದಸ್ಯರು, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಫಾತಿಮಾ ಉಸ್ಮಾನ್ ( ರಾಜ್ಯ ಸಮಿತಿ ಸದಸ್ಯರು, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಗೌಸ್ ಹೊಸಪೇಟೆ ( ರಾಜ್ಯ ಸಮಿತಿ ಸದಸ್ಯರು, ಕ್ಯಾಂಪಸ್ ಫ್ರಂಟ್ ಕರ್ನಾಟಕ)
ಆಕಿಬ್ ಬೆಂಗಳೂರು ( ಜಿಲ್ಲಾಧ್ಯಕ್ಷರು, ಕ್ಯಾಂಪಸ್ ಫ್ರಂಟ್ ಬೆಂಗಳೂರು)




