March 26, 2026

ಜೀನ್ಸ್ ಪ್ಯಾಂಟ್ ಧರಿಸಬೇಡ ಎಂದ ಪತಿಯನ್ನು ಹತ್ಯೆಮಾಡಿದ ಪತ್ನಿ

0
image_editor_output_image1328380960-1658207708708.jpg

ಜಾರ್ಖಂಡ್: ಜೀನ್ಸ್ ಧರಿಸುವ ಸಂಬಂಧ ಉಂಟಾದ ಗಲಾಟೆಯಲ್ಲಿ ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಜಂತಾರ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಯುವತಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್‌ನ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವಕ ಮತ್ತು ಯುವತಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು.

ಯುವಕ ಆಂದೋಲನ್ ತುಡು (18) ತನ್ನ ಪತ್ನಿ ಪುಷ್ಪಾ ಹೆಂಬ್ರಮ್ (17)ಗೆ ಜೀನ್ಸ್ ಧರಿಸುವುದು ಬೇಡ ಎಂದು ಹೇಳಿದ್ದ. ಅಲ್ಲದೆ, ಮದುವೆಯಾದ ಯುವತಿ ಸಾಂಪ್ರದಾಯಿಕ ಉಡುಪು ಮಾತ್ರ ಧರಿಸಬೇಕು ಎಂದು ಒತ್ತಾಯಿಸುತ್ತಿದ್ದ. ಈ ವಿಚಾರವಾಗಿ ಅವರ ಮಧ್ಯೆ ಆಗಾಗ ಜಗಳವುಂಟಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಜೀನ್ಸ್ ಧರಿಸಿದ್ದನ್ನು ಆಕ್ಷೇಪಿಸಿದ್ದ ಆಂದೋಲನ್ ಮೇಲೆ ಪುಷ್ಪಾ ಬಿದಿರಿನ ದೊಣ್ಣೆಯಿಂದ ಹಲ್ಲೆ ನಡೆಸಿದ್ದಳು. ಅದಾದ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!