February 2, 2026

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ: ಮೂವರು ಮೃತ್ಯು

0
image_editor_output_image-1889102273-1657960583844.jpg

ಕಲಬುರಗಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಮೂವರು ಬೈಕ್ ಸವಾರರು ಮೃತಪಟ್ಟ ಘಟನೆ ತಾಲ್ಲೂಕಿನ ಶಿರೋಳ್ಳಿ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಶಿರೋಳ್ಳಿಯ ಜಗನ್ನಾಥ (42), ಮಹಿಬೂಬ್ ಅಲಿ (52) ಹಾಗೂ ಶಾದಿಪುರದ ಶ್ರೀಕಾಂತ ಎಂದು ಗುರುತಿಸಲಾಗಿದೆ.

ಅಮರ ಎಂಬಾತ‌ ಗಾಯಗೊಂಡಿದ್ದಾ‌ನೆ.

ಗಾಯಾಳುವನ್ನು ಸೇಡಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಸುಲೇಪೇಟ ಪೊಲೀಸರು ತೆರಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!