August 25, 2026

2 ಲಕ್ಷ ರೂ. ಪರಿಹಾರ ಹಣವನ್ನು ಸಿದ್ದರಾಮಯ್ಯನವರ ಕಾರಿನ ಮೇಲೆ ಎಸೆದ ಮಹಿಳೆ

0
image_editor_output_image-568334644-1657875077330.jpg

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಪರಿಹಾರ ಧನವನ್ನು ಮಹಿಳೆಯೊಬ್ಬರು ಎಸೆದ ಘಟನೆ ಶುಕ್ರವಾರ ನಡೆದಿದೆ.

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಬಾಗಲಕೋಟೆಗೆ ಆಗಮಿಸಿದ ವೇಳೆ ಘಟನೆ ನಡೆದಿದ್ದು, ಗಾಯಾಳುಗಳ ಸಂಬಂಧಿಗಳು ಆಕ್ರೋಶ ಹೊರ ಹಾಕಿದ್ದಾರೆ. ಗಾಯಾಳುಗಳಿಗೆ ನೀಡಿದ ಹಣವನ್ನೇ ಮರಳಿ ಸಿದ್ದರಾಮಯ್ಯಗೆ ನೀಡಲು ಮುಂದಾಗಿದ್ದಾರೆ. ನಮಗೆ ನ್ಯಾಯ ಬೇಕು, ಹಣ ಬೇಡ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ವೇಳೆ ವಾಹನದಲ್ಲಿ ಸಿದ್ದರಾಮಯ್ಯ ಅವರು ಮರಳುತ್ತಲೇ ಹಣ ಹಿಡಿದು ವಾಹನದ ಹಿಂದೆ ಹೋದ ಮಹಿಳೆ ಹಣದ ಕಟ್ಟನ್ನು ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಆಶೀರ್ವಾದ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ ನೀಡಿ ಘರ್ಷಣೆಯಲ್ಲಿ ಗಾಯಗೊಂಡ ಹನೀಫ್, ರಾಜೇಸಾಬ್, ರಫೀಕ್, ದಾವಲ್ ಮಲೀಕ್ ಅವರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!