February 2, 2026

ಸುಳ್ಯ, ಕೊಡಗು ಗಡಿ ಭಾಗದ ಕೆಲವಡೆ ಮತ್ತೆ ದೊಡ್ಡ ಶಬ್ದದಿಂದ ಕಂಪಿಸಿದ ಭೂಮಿ

0
image_editor_output_image284374221-1657863900320.jpg

ಸುಳ್ಯ: ಸುಳ್ಯ ಮತ್ತು ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿರುವುದು ಅನುಭವಕ್ಕೆ ಬಂದಿರುವುದಾಗಿ ಜನ ಹೇಳಿಕೊಂಡಿದ್ದಾರೆ.

ಕೊಡಗು-ಸುಳ್ಯ ಗಡಿ ಪ್ರದೇಶವಾದ ಚೆಂಬು, ಸಂಪಾಜೆ, ಗೂನಡ್ಕ, ಅರಂತೋಡು, ತೊಡಿಕಾನ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಬೆಳಗ್ಗೆ 10.09ರ ವೇಳೆಗೆ ಭೂಮಿಯ ಒಳಗಿನಿಂದ ಭಾರೀ ಶಬ್ದ ಕೇಳಿಸಿದ್ದು, ಸೋಫಾ, ಮಂಚ, ಪಾತ್ರೆ, ಪರಿಕರಗಳು ಅಲುಗಾಡಿವೆ ಎಂಬುದಾಗಿ ಜನರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಸಂಚರಿಸುತ್ತಿದ್ದವರಿಗೂ ಗುಂಡಿಗೆ ಬಿದ್ದಂತ ಅನುಭವ ಉಂಟಾಗಿದೆ.

Leave a Reply

Your email address will not be published. Required fields are marked *

error: Content is protected !!