ಬಿ.ಸಿ.ರೋಡ್: ನಕಲಿ ಜೇನು ಮಾರಾಟಗಾರರಿಗೆ ಸ್ಥಳೀಯರಿಂದ ಧರ್ಮದೇಟು
ಬಂಟ್ವಾಳ: ಜೇನು ನೊಣವನ್ನು ಓಡಿಸಿ ಜೇನು ಕೊಡುತ್ತೇವೆಂದು ಮೋಸಗಾರರ ತಂಡವನ್ನು ಜನರು ಹೊಡೆದೋಡಿಸಿದ ಘಟನೆ ಬಿ.ಸಿ.ರೋಡಿನ ಕೈಕಂಬದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕೈಕಂಬದ ಜಂಕ್ಷನ್ ನಲ್ಲಿ ಬಹುಮಹಡಿಯ ಕಟ್ಟಡದಲ್ಲಿ ಬ್ರಹತ್ ಜೇನುಗೂಡೊಂದು ಕಟ್ಟಿದ್ದು, ಆ ಸಂದರ್ಭದಲ್ಲಿ ಅದನ್ನು ತೆರವುಗೊಳಿಸಲು ಅನ್ಯರಾಜ್ಯದ ಕಾರ್ಮಿಕೆರ ತಂಡ ಆಗಮಿಸಿ ಅವರು ಜೇನು ಇದೆಯೆಂದು ಜನರನ್ನು ನಂಬಿಸಿ ನಕಲಿ ಜೇನನ್ನು ಮಾರಾಟ ಮಾಡಿದರು. ಇದರಿಂದ ಕೋಪಗೊಂಡ ಸಾರ್ವಜನಿಕರು ಅವರಿಗೆ ತಕ್ಕ ಶಾಸ್ತ್ರ ನೀಡಿ ಕಳಿಸಿದ್ದಾರೆ.




