February 2, 2026

ಚಾಕು ಇರಿತಕ್ಕೊಳಗಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಅಯ್ಯೂಬ್‌ ಖಾನ್ ಮೃತ್ಯು

0
image_editor_output_image1699062478-1657776042069.jpg

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಇರಿತಕ್ಕೊಳಗಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಯೂಬ್‌ ಖಾನ್ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಚಾಮರಾಜಪೇಟೆ ಮನೆ ಬಳಿ ಅಯೂಬ್‌ ಖಾನ್‌ಗೆ ಬುಧವಾರ ಸಂಜೆ ಚಾಕುವಿನಿಂದ ಇರಿಯಲಾಗಿತ್ತು.

ಕೂಡಲೇ ಅಯೂಬ್‌ ಅವರನ್ನು ಚಿಕಿತ್ಸೆಗೆ ಏಷ್ಯನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ತಿ ವಿಚಾರವಾಗಿ ಸಂಬಂಧಿಕರೊಬ್ಬರು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಆರೋಪಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!