February 3, 2026

ಬಾಲಕಿಯ ಅಪಹರಿಸಿ ಪರಾರಿ: ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ

0
image_editor_output_image-1526144345-1657688417716.jpg

ಬೆಂಗಳೂರು: ಹದಿನಾರು ವರ್ಷದ ಬಾಲಕಿಯನ್ನು ಅಪಹರಿಸಿಕೊಂಡು ಪರಾರಿಯಾಗಿರುವ ಆರೋಪಿ ಲಿಂಗರಾಜು ಅಲಿಯಾಸ್ ವಿರಾಟ್ (26) ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿರುವ ಶಿವಮೊಗ್ಗ ಪೊಲೀಸರು, ಈತನ ಸುಳಿವು ನೀಡಿದವರಿಗೆ ₹ 50 ಸಾವಿರ ಬಹುಮಾನ ಘೋಷಿಸಿದ್ದಾರೆ.

‘ಶಿವಮೊಗ್ಗ ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಬಾಲಕಿಯನ್ನು ಪುಸಲಾಯಿಸಿದ್ದ ಲಿಂಗರಾಜು, ಹಲವು ಆಮಿಷವೊಡ್ಡಿ 2021ರ ಡಿಸೆಂಬರ್ 27ರಂದು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಈತನ ಪತ್ತೆಗಾಗಿ ಹಲವೆಡೆ ಹುಡುಕಾಟ ನಡೆಸಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಸುಳಿವು ಲಭ್ಯವಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕರೆ, ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್– 9480803349, 9449584739 ಅಥವಾ ನಿಯಂತ್ರಣ ಕೊಠಡಿ 9480803300 ಸಂಖ್ಯೆಗೆ ಮಾಹಿತಿ ನೀಡಬಹುದು. ಸುಳಿವು ನೀಡಿದವರ ಹೆಸರು
ಗೌಪ್ಯವಾಗಿರಿಸಲಾಗುವುದು’ ಎಂದೂ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!