ಮನೆ ಕೆಲಸದ ಸೋಗಿನಲ್ಲಿ ಕಳ್ಳತನ: ವುಮೆನ್ಸ್ ಗ್ಯಾಂಗ್‌ನ ಬಂಧನ
ಬೆಂಗಳೂರು: ಫೇಸ್‌ಬುಕ್‌ನಲ್ಲಿ ಮನೆ ಕೆಲಸದವರು ಲಭ್ಯವಿದ್ದಾರೆ ಎಂದು “ಪಬ್ಲಿಕ್ ಗ್ರೂಪ್’ ತೆರೆದು ಮನೆ ಕೆಲಸದ ಸೋಗಿನಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಮುಂಬೈ ಮೂಲದ ನಟೋರಿಯಲ್ “ವುಮೆನ್ಸ್ ಗ್ಯಾಂಗ್’ ಬೆಂಗಳೂರು ನಗರ ಪೊಲೀಸರ ಬಲೆಗೆ ಬಿದ್ದಿದೆ.
ಮುಂಬೈ ನಿವಾಸಿಗಳಾದ ಪ್ರಿಯಾಂಕಾ ರಾಜೇಶ್ ಮೊಗ್ರೆ (29), ಮಹಾದೇವಿ (26) ಹಾಗೂ ನವ ಮುಂಬೈ ನಿವಾಸಿ ವನಿತಾ ಗಾಯ್ಕವಾಡ್ (37) ಬಂಧಿತರು. ಅವರಿಂದ 250 ಗ್ರಾಂ ಚಿನ್ನಾಭರಣ ಹಾಗೂ 100 ಗ್ರಾಂ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಮಹಾದೇವಿ, ಹೆಣ್ಣೂರಿನ ಅರವಿಂದ ಎಂಬುವರ ಮನೆ ಯಲ್ಲಿ ಮನೆಗೆಲಸಕ್ಕೆ ಸೇರಿದ್ದಳು. ಕೆಲಸಕ್ಕೆ ಸೇರಿದ ಮೂರೇ ದಿನಕ್ಕೆ ಮನೆಯಲ್ಲಿ ಯಾರು ಇಲ್ಲದ ವೇಳೆ ಚಿನ್ನಾಭರಣ ದೋಚಿ ಪರಾರಿ ಯಾಗಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.




