March 26, 2026

ಕಾಸರಗೋಡು: ರೈಲಿನಿಂದ ಆಕಸ್ಮಿಕವಾಗಿ ಬಿದ್ದು ವಕೀಲ ಮೃತ್ಯು

0
image_editor_output_image-578887044-1657543441433.jpg

ಕಾಸರಗೋಡು: ರೈಲಿನಿಂದ ಆಕಸ್ಮಿಕವಾಗಿ ಬಿದ್ದು ನ್ಯಾಯವಾದಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬೇಕಲದಲ್ಲಿ ಭಾನುವಾರ ರಾತ್ರಿ ನಡೆದಿದೆ.

ತೃಶ್ಯೂರು ಅವನ್ನೂರಿನ ಕೆ.ಆರ್ ವಲ್ಸನ್ (72) ಮೃತಪಟ್ಟವರು.

ಪತ್ನಿ ಹಾಗೂ ಮಕ್ಕಳ ಜೊತೆ ಕೊಲ್ಲೂರು ದೇವಸ್ಥಾನ ದರ್ಶನ ಮುಗಿಸಿ ಮರಳುತ್ತಿದ್ದಾಗ ಬೇಕಲ ಸಮೀಪದ ಉದುಮದಲ್ಲಿ ಈ ಘಟನೆ ನಡೆದಿದೆ. ಹತ್ತು ಮಂದಿಯ ತಂಡ ಕೊಲ್ಲೂರಿಗೆ ತೆರಳಿತ್ತು.

ಬೇಕಲ ಉದುಮಕ್ಕೆ ತಲಪಿದಾಗ ಓರ್ವ ಪ್ರಯಾಣಿಕ ರೈಲಿನಿಂದ ಬೀಳುವುದನ್ನು ಭದ್ರತಾ ಸಿಬಂದಿಯೋರ್ವ ಗಮನಿಸಿದ್ದು. ಬಳಿಕ ರೈಲಿನಲ್ಲಿರುವ ಪ್ರಯಾಣಿಕರಿಗೆ ಮಾಹಿತಿ ನೀಡಿದರು. ತಪಾಸಣೆ ನಡೆಸಿದಾಗ ವತ್ಸನ್ ನಾಪತ್ತೆಯಾಗಿದ್ದರು. ಇದರಿಂದ ಜೊತೆಗಿದ್ದವರು ಬೇಕಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಪಾಸಣೆ ನಡೆಸಿದಾಗ ರೈಲ್ವೆ ಹಳಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಕೂಡಲೇ ಪೊಲೀಸರು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಊರಿಗೆ ಕೊಂಡೊಯ್ಯಲಾಗಿದೆ.

Leave a Reply

Your email address will not be published. Required fields are marked *

error: Content is protected !!