March 26, 2026

ಬ್ರಹ್ಮಾವರ: ಬೈಕ್ ಗೆ ಕಾರು‌ ಢಿಕ್ಕಿ, ಬೈಕ್ ಸವಾರ ಮೃತ್ಯು

0
image_editor_output_image252084996-1657528957625.jpg

ಉಡುಪಿ: ಬ್ರಹ್ಮಾವರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಹೊಟೇಲ್ ಮಣಿಪಾಲ್ ಇನ್ ಬಳಿ ಡಿವೈಡರ್ ಗೆ ಢಿಕ್ಕಿ ಹೊಡೆದು, ಬಳಿಕ ಬೈಕಿನ ಮೇಲೆ ಬಿದ್ದಿದ್ದು,ಬೈಕ್ ಸವಾರ ಮೃತ ಪಟ್ಟಿರುವ ಘಟನೆ ಸಂಭವಿಸಿದೆ.

ಮೃತಪಟ್ಟ ಬೈಕ್‌ ಸವಾರನನ್ನು ವಿಜಯಪುರದ ನಿವಾಸಿ ಸುನಿಲ್ (24) ಎಂದು ಗುರುತಿಸಲಾಗಿದೆ.

ಮೊದಲು ರಸ್ತೆಯ ಡಿವೈಡರ್ ಗೆ ಕಾರು ಢಿಕ್ಕಿ ಹೊಡೆದು ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌‌ನ ಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟು, ಸಹಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್‌ ಗಾಯಗೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!