March 26, 2026

ಉಳ್ಳಾಲ: ವಿವಾಹಿತೆ ಸಂಶಯಾಸ್ಪದವಾಗಿ ಸಾವು

0
image_editor_output_image1314780236-1657526980200.jpg

ಉಳ್ಳಾಲ: ವಿವಾಹಿತೆಯೋರ್ವರು  ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲತ್ ನಗರ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.

ಮಿಲ್ಲತ್ ನಗರ ನಿವಾಸಿ ಜಂಶೀರಾ ( 25) ಮೃತ ದುರ್ದೈವಿ. ಈಕೆಯ ಪತಿ ಇರ್ಫಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪತಿ ಪ್ರಕಾರ ನಿನ್ನೆ ರಾತ್ರಿ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಆನಂತರ ಜಂಶೀರಾ ಕೋಣೆಯೊಳಕ್ಕೆ ತೆರಳಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಪತಿ ಇರ್ಫಾನನಿಗೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಆಕೆಯನ್ನು ಮೇಲಿಂದ ಇಳಿಸಿ ಆಸ್ಪತ್ರೆ ಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿರುವುದಾಗಿ‌ ವೈದ್ಯರು ತಿಳಿಸುತ್ತಿದ್ದಂತೆ ಮತ್ತೆ ಮೃತದೇಹವನ್ನು ವಾಪಸ್ಸು ಮನೆಗೆ ತಂದಿದ್ದಾನೆ. ಆನಂತರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!