February 4, 2026

ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕೊಚ್ಚಿಯಲ್ಲಿ ಲ್ಯಾಂಡ್

0
IMAGE_1650261983.webp

ಮಂಗಳೂರು: ದುಬಾೖಯಿಂದ ಮಂಗಳೂರಿಗೆ ಜು. 8ರಂದು ರಾತ್ರಿ ಬಂದ ಸ್ಪೈಸ್‌ಜೆಟ್‌ ವಿಮಾನವು ತಾಂತ್ರಿಕ ಕಾರಣಗಳಿಂದ ಇಳಿಯದೆ ಕೊಚ್ಚಿಗೆ ತೆರಳಿದ್ದು, 189 ಮಂದಿ ಪ್ರಯಾಣಿಕರು ರಾತ್ರಿಯಿಡೀ ನಿಲ್ದಾಣದಲ್ಲೇ ಇರುವಂತಾಯಿತು.

ಜು. 8ರ ಸಂಜೆ 5ಕ್ಕೆ ವಿಮಾನ ದುಬಾೖಯಿಂದ ಹೊರಟು ರಾತ್ರಿ 9.30ಕ್ಕೆ ಮಂಗಳೂರಿಗೆ ಆಗಮಿಸಿದೆ, ಲ್ಯಾಂಡ್‌ ಆಗುವುದಕ್ಕೆ ಮುಂದಾಗಿತ್ತು. ಭೂಸ್ಪರ್ಶ ಮಾಡುತ್ತದೆ ಎನ್ನುವಾಗಲೇ ಮತ್ತೆ ಪೈಲಟ್‌ ಮೇಲೇರಿಸಿದ್ದು ಕೊಯಮತ್ತೂರಿಗೆ ಹೋಗುವುದಾಗಿ, ಇಂಧನ ಭರ್ತಿ ಮಾಡುವುದಾಗಿ ತಿಳಿಸಲಾಯಿತು. ಬಳಿಕ ಕೊಚ್ಚಿಗೆ ಹೋಗುವುದಾಗಿ ತಿಳಿಸಲಾಯಿತು.

ರಾತ್ರಿ ಕೊಚ್ಚಿಯಲ್ಲಿ ಇಳಿಯಿತು. ಈ ಪೈಲಟ್‌ ಶಿಫ್ಟ್‌ ಮುಗಿದಿದ್ದು ಇನ್ನೊಬ್ಬರು ಬರುತ್ತಾರೆ ಅಲ್ಲಿವರೆಗೆ ವಿಶ್ರಾಂತಿ ಮಾಡಿ ಎಂದು ಪ್ರಯಾಣಿಕರಿಗೆ ತಿಳಿಸಲಾಯಿತು. ಬಳಿಕ ಜು. 9ರ ಮುಂಜಾನೆ 3ಕ್ಕೆ ವಿಮಾನ ಹೊರಡುವುದಾಗಿ ತಿಳಿಸಿದರೂ ಬೆಳಗ್ಗಿನ ವರೆಗೂ ಹೊರಡಲಿಲ್ಲ.

ಕೊನೆಗೆ ಬೆಳಗ್ಗೆ 8.30ಕ್ಕೆ ವಿಮಾನ ಹೊರಡುವುದಾಗಿ ಪ್ರಯಾಣಿಕರನ್ನೆಲ್ಲ ವಿಮಾನವೇರುವಂತೆ ಸೂಚಿಸಿದರು. ವಿಮಾನ 10ರ ವರೆಗೆ ಹೊರಡಲೇ ಇಲ್ಲ. ಮಂಗಳೂರು ವಿಮಾನ ನಿಲ್ದಾಣದಿಂದ ಕ್ಲಿಯರೆನ್ಸ್‌ ಸಿಕ್ಕಿಲ್ಲ ಎಂದು ತಿಳಿಸಿದರು. ಕೊನೆಗೆ ವಿಮಾನ 10ಕ್ಕೆ ಹೊರಟಿದ್ದು 10.50ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ.

ಹವಾಮಾನದ ನೆಪವೊಡ್ಡಲಾಗಿದೆ. ಆದರೆ ಯಾವುದೋ ಬೇರೆ ತಾಂತ್ರಿಕ ಕಾರಣಗಳಿಂದ ಕೊಚ್ಚಿಯಲ್ಲಿ ಇಳಿಸಿದ್ದಾರೆ. ಅಲ್ಲೂ ಯಾವುದೇ ಸೌಲಭ್ಯ ಕೊಡಲಿಲ್ಲ, ರೂಂ ಒದಗಿಸಿಲ್ಲ, ಬದಲು ನಾವು ಏರ್‌ಪೋರ್ಟ್‌ ನಲ್ಲೇ ಕಾಯುವಂತಾಯಿತು, ನಮ್ಮ ಖರ್ಚಲ್ಲೇ ಊಟ, ತಿಂಡಿ ಮಾಡಿಕೊಳ್ಳುವ ಹಾಗೆ ಆಗಿದೆ, ಸ್ಪೈಸ್‌ಜೆಟ್‌ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಕೊಚ್ಚಿಯಲ್ಲಿ ವಿಮಾನ ಇಳಿದಾಗ ಕೆಲವು ಕೇರಳದ ಪ್ರಯಾಣಿಕರು ಅಲ್ಲೇ ಇಳಿದು ಹೋಗಿದ್ದಾರೆ, ಅವರ ಲಗೇಜ್‌ ಜತೆಗೆ ಕೆಲವು ಮಂಗಳೂರಿನವರ ಲಗೇಜ್‌ ಕೂಡ ಹೋಗಿದೆ. ಇನ್ನು ಅವರು ಅದಕ್ಕಾಗಿ ಕಾಯಬೇಕಿದೆ.

Leave a Reply

Your email address will not be published. Required fields are marked *

error: Content is protected !!