February 4, 2026

ಶಾಲಾ ಬಸ್ ಪಲ್ಟಿ: 10ಕ್ಕೂ ಅಧಿಕ ಮಕ್ಕಳಿಗೆ ಗಾಯ

0
image_editor_output_image756874059-1657365741893.jpg

ಹಾಸನ: ಬಸ್ ಚಾಲಕನ ನಿಯಂತ್ರಣ ತಪ್ಪಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಂತ ಬಸ್ ಉರುಳಿ ಬಿದ್ದು, 10ಕ್ಕೂ ಅಧಿಕ ಮಕ್ಕಳು ಗಾಯಗೊಂಡಿರುವ ಘಟನೆ ಹಾಸನದ ಉಗನೆ ಗ್ರಾಮದಲ್ಲಿ ನಡೆದಿದೆ.

ಖಾಸಗಿ ಶಾಲೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದ್ದು, ಈ ಹಿನ್ನಲೆಯಲ್ಲಿ ಬಸ್ ನಲ್ಲಿದ್ದಂತ 25 ಮಕ್ಕಳಲ್ಲಿ 10ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಗಾಯಗೊಂಡ ಮಕ್ಕಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಾಲಾ ಬಸ್ ಪಲ್ಟಿಗೆ ರಸ್ತೆ ಅವ್ಯವಸ್ಥೆಯೇ ಕಾರಣ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!