February 3, 2026

ಬಂಟ್ವಾಳ: ಅಮರನಾಥದಲ್ಲಿ ಮೇಘಸ್ಪೋಟ ಹಿನ್ನೆಲೆ: ಬಂಟ್ವಾಳದ 30 ಮಂದಿ ಸುರಕ್ಷಿತ

0
IMG-20220709-WA0001.jpg

ಬಂಟ್ವಾಳ: ಅಮರನಾಥದಲ್ಲಿ ನಡೆದಿರುವ ಮೇಘಸ್ಪೋಟದಲ್ಲಿ ನಡೆದಿರುವ ಜೀವಹಾನಿಯ ಸುದ್ದಿಯ ಬೆನ್ನಲ್ಲೇ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥ ಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಬಂದಿದೆ.

ಘಟನೆ ನಡೆದ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ‌ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿಯವರು ಯಾತ್ರಿಗಳ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು 28 ಕಿ.ಮೀ‌.ಸಂಚರಿಸಿದರೆ ನಾವು ಯಾತ್ರಾಸ್ಥಳಕ್ಕೆ ತಲುಪುತ್ತೇವೆ, ಇಲ್ಲಿ ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ, ನಾಳೆ ಬೆಳಿಗ್ಗೆ ಅಮರನಾಥ ದಲ್ಲಿ‌ ದರ್ಶನ ಭಾಗ್ಯ ಸಿಗುವ ನಿರೀಕ್ಷೆ ಇದೆ ಎಂದು ಯಾತ್ರಾ ತಂಡದ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!