ವಿಟ್ಲ: ಅಂಗಡಿ ಕಟ್ಟಡಗಳ ಹೊರಾಂಗಣದಲ್ಲಿ ನೀರು ಹರಿದು ಅಸ್ತವ್ಯಸ್ತ
ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲ-ಪುತ್ತೂರು ರಸ್ತೆಯ ಕಟ್ಟಡದಲ್ಲಿರುವ ಅಂಗಡಿಗಳ ಹೊರಾಂಗಣಕ್ಕೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿಟ್ಲ-ಪುತ್ತೂರು ರಸ್ತೆಯ ಸಿ.ಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಕಟ್ಟಡದ ಹೊರಂಗಣದಲ್ಲಿ ನೀರು ಹರಿದು ಗ್ರಾಹಕರು ಮತ್ತು ಅಂಗಡಿ ಮಾಲಕರು ತೊಂದರೆ ಅನುಭವಿಸಿದರು. ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಈ ರೀತಿಯ ಪರಿಸ್ಥಿತಿ ನಿರ್ಮಾಣ ಗೊಂಡಿದೆ.




