February 4, 2026

ಮಂಗಳೂರು: ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ?
ರೌಡಿಗಳ ಚಳಿ ಬಿಡಿಸಿದ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್

0
image_editor_output_image17399814-1657113652215

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ನಗರದ ಪೊಲೀಸ್​ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಿಶೋರ್​​ ಗೆ ಕ್ಲಾಸ್​​ ತೆಗೆದುಕೊಂಡ ಎನ್.ಶಶಿಕುಮಾರ್ ಅವರು ಕಿಶೋರ್ ಗೆ ಬಟ್ಟೆ ಬಿಚ್ಚಿಸಿ, ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ? ಎಂದು ಕೇಳಿದ್ದಾರೆ. ಅದಕ್ಕೆ ಡ್ಯಾನ್ಸರ್ ಕಿಶೋರ್​​ ತಾಯಿಯ ಟ್ಯಾಟೋ ಅಂತಾ ಉತ್ತರಿಸಿದ್ದಾನೆ. ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಹೇಳಿದ್ದಾರೆ.


ಅದಾದಮೇಲೆ ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ದೀಯಾ, ಸಪ್ಲೈ ನಿಲ್ಲಿಸಿದ್ದೀಯಾ? ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಎಂದೂ ಡ್ಯಾನ್ಸರ್ ಕಿಶೋರ್ ಯನ್ನು ವಿಚಾರಿಸಿಕೊಂಡಿದ್ದಾರೆ. ಕಿಶೋರ್ ಉದ್ದ ತಲೆಗೂದಲು ಬಿಟ್ಟಿದ್ದನ್ನು ಕಮೀಷನರ್ ಶಶಿಕುಮಾರ್ ಅವರು ಪ್ರಶ್ನಿಸಿದಾಗ ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ ಎಂದು ಉತ್ತರಿಸಿದ್ದಾನೆ. ಇದೇ ವೇಳೆ ಮಂಗಳೂರಿನ ಇತರೆ ರೌಡಿಗಳು, ಡ್ರಗ್ಸ್, ಗಾಂಜಾ ಕಳ್ಳರಿಗೂ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಚಳಿ ಬಿಡಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!