ಮಡಿಕೇರಿ ಜಿಲ್ಲಾದ್ಯಂತ ಮುಂದುವರಿದ ಮಳೆ: ರಸ್ತೆ ಉರುಳಿದ ಕಲ್ಲು, ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗೆ
ಮಡಿಕೇರಿ: ಕೊಡಗು ಜಿಲ್ಲಾದ್ಯಂತ ಸೋಮವಾರ ರಾತ್ರಿ ಇಡೀ ಭಾರಿ ಗಾಳಿ ಹಾಗೂ ಮಳೆ ಮುಂದುವರಿದಿದೆ.
ಸತತ ,4 ನೇ ದಿನವೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಲಕಾವೇರಿ ಭಾಗಮಂಡಲ ಪ್ರದೇಶದಲ್ಲಿ ಕಲ್ಲೊಂದು ರಸ್ತೆಗೆ ಉರುಳಿ ಬಿದ್ದಿದೆ. ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿಗೆ ಮುರಿದಿವೆ.
ಸೋಮವಾರ ರಾತ್ರಿ ಇಡೀ ಮಡಿಕೇರಿ ನಗರಕ್ಕೆ ವಿದ್ಯುತ್ ಸರಬರಾಜು ನಿಂತಿತ್ತು. ಬೆಳಿಗ್ಗೆ ವಿದ್ಯುತ್ ಪೂರೈಕೆ ಆಗಿದ್ದರೂ ಕುಶಾಲನಗರ ಸಮೀಪ ವಿದ್ಯುತ್ ಲೈನ್ ನಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ.
ಮಂಗಳವಾರ ಸಂಜೆಯವರೆಗೂ ವಿದ್ಯುತ್ ಪೂರೈಕೆ ಮಡಿಕೇರಿ ನಗರಕ್ಕೆ ಸ್ಥಗಿತಗೊಳ್ಳಲಿದೆ ಎಂದು ಸೆಸ್ಕ್ ತಿಳಿಸಿದೆ.




