March 26, 2026

ವಿಟ್ಲ: ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

0
IMG-20220702-WA0008.jpg

ವಿಟ್ಲ: ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳಾದ ಎಂಡಿಎಮ್ಎ, ಗಾಂಜಾವನ್ನು ಮತ್ತು ಸಾಗಿಸುತ್ತಿದ್ದ ಆರೋಪಿಗಳನ್ನು ವಶ ಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.

ಬಂಧಿತರನ್ನು ಮೂಲತಃ ನೆಲ್ಲಿಗುಡ್ಡೆ ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಸಾಲೆತ್ತೂರು ಸಮೀಪದ ಕಟ್ಟೆತ್ತಿಲ್ಲ ಜಲಲೂದ್ಧಿನ್, ಒಕ್ಕೆತ್ತೂರು ಪೈಝಲ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸಾವಿರಾರು ರೂ ಮೌಲ್ಯದ ಎಂಡಿಎಮ್ಎ, ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ಒಂದು ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಕರ್ನಾಟಕ ಭಾಗಗಳಿಗೆ ಮಾದಕ ವಸ್ತುಗಳನ್ನು ಸಾಗಾಟ ಮಾಡುವ ಇವರು ಅಂತರಾಜ್ಯ ಡ್ರಗ್ ಪೆಡ್ಲರ್ ಗಳಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಸಬ್ ಇನ್ಸ್ಪೆಕ್ಟರ್ ಸಂದೀಪ್, ಮಂಜುನಾಥ್, ಸಿಬ್ಬಂದಿಗಳಾದ ಹೇಮಾರಾಜ್, ಅಶೋಕ್, ವಿಠಲ್ ರವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!