ಇಬ್ಬರು ಪುತ್ರಿಯರನ್ನು ಹತ್ಯೆ ಮಾಡಿ ಪೊಲೀಸರ ಮುಂದೆ ಶರಣಾದ ತಂದೆ
ಕಲಬುರಗಿ: ಕಲಬುರಗಿಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಪುತ್ರಿಯರನ್ನು ಹತ್ಯೆ ಮಾಡಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ.
ಆರೋಪಿ ತಂದೆಯನ್ನು ಲಕ್ಷ್ಮೀಕಾಂತ ಎಂದು ಗುರುತಿಸಲಾಗಿದ್ದು, ಹತ್ಯೆಯಾದ ಮಕ್ಕಳನ್ನು ಸೋನಿ (11) ಹಾಗೂ ಮಯೂರಿ (9) ಎನ್ನಲಾಗಿದೆ.
ಲಕ್ಷ್ಮೀಕಾಂತ್ ದ ಬಳಿ ಇಬ್ಬರು ಹೆಣ್ಣುಮಕ್ಕಳನ್ನು ತನ್ನ ಆಟೋರಿಕ್ಷಾದಲ್ಲಿ ಕರೆದೊಯ್ದು ಕತ್ತು ಹಿಸುಕಿ ಹತ್ಯೆ ಮಾಡಿ ಬಳಿಕ ಕಂಗಾಲಾಗಿ ರಾತ್ರಿಯಿಡೀ ಶವಗಳನ್ನು ಹೊತ್ತು ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮನೆಗೆ ಮರಳಿದ್ದಾನೆ.
ಇನ್ನು ಆತನ ಮತ್ತಿಬ್ಬರು ಮಕ್ಕಳು ಮನೆಯಲ್ಲಿದ್ದು, ಬಳಿಕ ಮತ್ತಿಬ್ಬರು ಮಕ್ಕಳು ಹಾಗೂ ಶವಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.