ವಿಟ್ಲ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ: ಅಧ್ಯಕ್ಷರಾಗಿ ಪ್ರಕಾಶ್ ನಾಯಕ್, ಕಾರ್ಯದರ್ಶಿ ಕಿರಣ್ ಕುಮಾರ್ ಅಧಿಕಾರ ಸ್ವೀಕಾರ
ವಿಟ್ಲ: ವಿಟ್ಲ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಬೊಬ್ಬೆಕೇರಿ ಗಜಾನನ ಸಭಾಂಗಣದಲ್ಲಿ ನಡೆಯಿತು.
ರೋಟರಿ ಜಿಲ್ಲೆಯ ಐಪಿಡಿಜಿ ರಂಗನಾಥ ಭಟ್ ಅವರು ವಿಟ್ಲ ರೋಟರಿ ಕ್ಲಬ್ ನ ನೂತನ ಅಧ್ಯಕ್ಷ ಪ್ರಕಾಶ್ ನಾಯಕ್ ಮತ್ತು ಕಾರ್ಯದರ್ಶಿ ಕಿರಣ್ ಕುಮಾರ್ ಬ್ರಹ್ಮಾವರ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ನಡೆಸಿಕೊಟ್ಟರು.

ರೋಟರಿ ಜಿಲ್ಲೆಯ ಐಪಿಡಿಜಿ ರಂಗನಾಥ ಭಟ್, ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ನೂತನ ಅಧ್ಯಕ್ಷ ಪ್ರಕಾಶ್ ನಾಯಕ್ ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿಟ್ಲದ ಹಿರಿಯ ಉದ್ಯಮಿ ನಿತ್ಯಾನಂದ ಶೆಣೈ ಮತ್ತು ಸಾಧಕ ಸಂತೋಷ್ ಸಿ.ಎಚ್ ಅವರನ್ನು ಸನ್ಮಾನಿಸಲಾಯಿತು.
ಮೋಹನ ಮೈರ ಅವರ ಮೂಲಕ ಬಡಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಲಾಯಿತು. ಕನ್ಯಾನ ಭಾರತ ಸೇವಾಶ್ರಮಕ್ಕೆ ಡಾ. ಚರಣ್ ಕಜೆ ಮೂಲಕ ಧನ ಸಹಾಯ ವಿತರಿಸಲಾಯಿತು.

ಎಂ ಫ್ರೆಂಡ್ಸ್ ಕಾರುಣ್ಯ ಯೋಜನೆಗೆ ನೂತನ ಅಧ್ಯಕ್ಷ ಪ್ರಕಾಶ ನಾಯಕ್ ಅವರ ಮೂಲಕ ಧನ ಸಹಾಯ ವಿತರಿಸಲಾಯಿತು. ವಿಟ್ಲ ವಿಠಲ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಡಾ. ವಿಕೆ ಹೆಗ್ಡೆ ಮೂಲಕ ಪುಸ್ತಕ ವಿತರಿಸಲಾಯಿತು. ರೋಟರಿ ಕ್ಲಬ್ ನಿರ್ಗಮನ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ ಮತ್ತು ಕಾರ್ಯದರ್ಶಿ ಸೋಮಶೇಖರ, ವಲಯ ಕಾರ್ಯದರ್ಶಿ ಜಯರಾಮ ರೈ ಅವರನ್ನು ಗೌರವಿಸಲಾಯಿತು. ನಿವೃತ್ತ ಸೈನಿಕ ದಾಸಪ್ಪ ಪೂಜಾರಿ, ದಿನೇಶ್ ಕುಮಾರ್, ತೌಸೀಪ್ ಎಂ.ಜಿ, ಉಬೈದ್ ವಿಟ್ಲ ಬಝಾರ್ ವಿಟ್ಲ ರೋಟರಿ ಕ್ಲಬ್ ಗೆ ಸೇರ್ಪಡೆಗೊಂಡರು.
ವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ, ವಲಯ ಸೇನಾನಿ ಪ್ರಮೋದ್ ಮಲ್ಲಾರ, ಪುತ್ತೂರು ಕ್ಲಬ್ ನ ಪ್ರಶಾಂತ್ ಶೆಣೈ, ಮಾಜಿ ಅಧ್ಯಕ್ಷ ಕೃಷ್ಣ ಭಟ್ ಉಪಸ್ಥಿತರಿದ್ದರು.
ರಶೀದ್ ವಿಟ್ಲ, ಜೈಕಿಶನ್, ಭಾಸ್ಕರ್ ಶೆಟ್ಟಿ, ಸಂಜೀವ ಪೂಜಾರಿ, ರಮೇಶ್ ಬಿ.ಕೆ, ಬಾಲಕೃಷ್ಣ, ವಿವಿಧ ಜವಾಬ್ದಾರಿ ನಿರ್ವಹಿಸಿದರು.





