ಹಾಸನದಲ್ಲಿ ಸುಳ್ಯ ಮೂಲದ ಯುವಕನ ಬೆಲೆಬಾಳುವ ಮೊಬೈಲ್ ಫೋನ್ ಮತ್ತು ಹಣ ದರೋಡೆ
ಸುಳ್ಯ: ಹಾಸನಕ್ಕೆ ವ್ಯಾಪಾರಕ್ಕೆ ಹೋಗಿದ್ದ ಜಯನಗರ ಮೂಲದ ಯುವಕನ ಕೈಯಿಂದ ನಿನ್ನೆ ರಾತ್ರಿ ಒಂದು ಗಂಟೆಗೆ ಅಪರಿಚಿತರು ಬೆಲೆಬಾಳುವ ಮೊಬೈಲ್ ಮತ್ತು ಹಣ ದರೋಡೆ ಮಾಡಿರುವ ಘಟನೆ ತಿಳಿದು ಬಂದಿದೆ.
ಸುಳ್ಯ ಜಯನಗರ ಪರಿಸರದ ಪ್ರದೀಪ ಎಂಬ ಯುವಕ ಹಾಸನದಲ್ಲಿ ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆ ಹೋಗಿದ್ದರು.
ನಿನ್ನೆ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಪ್ರದೀಪ ಬಸ್ಸು ಇಳಿದು ರೂಮಿಗೆ ಹೋಗುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳು ಬಂದು ಚೂರಿ ತೋರಿಸಿ ಪ್ರದೀಪನ ಬಳಿಯಿದ್ದ ಸುಮಾರು 20 ಸಾವಿರ ರೂಪಾಯಿ, ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ಅವರ ಕೈಯಲ್ಲಿದ್ದ 300 ರೂಪಾಯಿಗಳನ್ನು ಕಿತ್ತು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯನ್ನು ಅವರು ದೂರವಾಣಿ ಮೂಲಕ ಸುಳ್ಯದಲ್ಲಿರುವ ಅವರ ಮಾಲಕರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ತಿಳಿಸುವಂತೆ ಮಾಲಕರು ಯುವಕರಿಗೆ ಹೇಳಿರುತ್ತಾರೆ ಎನ್ನಲಾಗಿದೆ.




