March 19, 2026

ವಿಟ್ಲ: ವಿವಾಹಿತ ಮಹಿಳೆ ಮೇಲೆ ಚೂರಿಯಿಂದ ಇರಿದು ಹತ್ಯೆ: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ನಡೆದ ಘಟನೆ

0
image_editor_output_image586545195-1656329805124

ವಿಟ್ಲ: ಯುವತಿಯೊಬ್ಬಳ ಮೇಲೆ ಆಟೋದಲ್ಲಿ ಬಂದ ತಂಡಯೊಂದು ಚೂರಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಸಮೀಪದ ಮಾಣಿಯ ನೇರಳಕಟ್ಟೆ ಎಂಬಲ್ಲಿ ನಡೆದಿದೆ.

ಮಾಣಿಯ ಕಾಪಿಕಾಡು ನಿವಾಸಿ ದಿ. ತ್ಯಾಂಪ ಪೂಜಾರಿ ಅವರ ಪುತ್ರಿ, ಪ್ರಸ್ತುತ ಅನಂತಾಡಿಯ ದೇವಿ ನಗರ ನಿವಾಸಿ ಶಕುಂತಾಳ(35) ದಾಳಿಗೊಳಗಾದ ಮಹಿಳೆ ಎಂದು ತಿಳಿದು ಬಂದಿದೆ. ಮಾಣಿಯ ದಾಳಿಯಿಂದ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಈಕೆ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಆಕ್ಟೀವಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ತಂಡ ಮಾರಕಾಯುಧಗಳಿಂದ ದಾಳಿ ನಡೆಸಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದುರೂ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಆರೋಪಿಗಳ ಆಟೋ ರಿಕ್ಷಾ

Leave a Reply

Your email address will not be published. Required fields are marked *

error: Content is protected !!