March 20, 2026

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಓರ್ವ ಮೃತ್ಯು

0
image_editor_output_image722236209-1656145301419.jpg

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೂ ತೋಡಿಗೆ ಬಿದ್ದು ಓರ್ವ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನೀಲೇಶ್ವರ ಪರಪಚ್ಚಾಲ್ ನಲ್ಲಿ ನಡೆದಿದೆ.

ಪಾಲಕ್ಕಾಡ್ ಮಣ್ಣರಕ್ಕಾಡ್ ನ ಹಬೀಬ್ ( 50) ಮೃತಪಟ್ಟವರು. ಚಾಲಕ ರಹೀಮ್ ಗಾಯ ಗೊಂಡಿದ್ದಾರೆ. ನೀಲೇಶ್ವರ ಕಡೆಗೆ ಸಿಮೆಂಟ್ ಹೇರಿಕೊಂಡು ತೆರಳುತ್ತಿದ್ದ ಲಾರಿ ಪರಪ್ಪಚ್ಚಾಲ್ ನ ಸೇತುವೆ ಯಿಂದ ತೋಡಿಗೆ ಬಿದ್ದಿದ್ದು, ಲಾರಿಯಲ್ಲಿ ಸಿಲುಕಿದ್ದ ಇಬ್ಬರನ್ನು ಪರಿಸರ ವಾಸಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಹಬೀಬ್ ಮೃತಪಟ್ಟಿದ್ದರು.

ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!