March 20, 2026

ಬಂಟ್ವಾಳ: ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-1716545012-1655965808456.jpg

ಬಂಟ್ವಾಳ: ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಎಂದು ಗುರುತಿಸಲಾಗಿದೆ.

ಸುಮಾರು 5 ವರ್ಷಗಳ ಹಿಂದೆ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ .

ಇದಲ್ಲದೆ ಈತನ ವಿರುದ್ಧ ಮಂಗಳೂರಿನ ಮುಲ್ಕಿ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಸೇರಿ ಒಟ್ಟು 3 ಪ್ರಕರಣಗಳು, ಬಂದರು ಠಾಣೆಯಲ್ಲಿ 2 ಪ್ರಕರಣಗಳು, ಪಾಂಡೇಶ್ವರ ಠಾಣೆಯಲ್ಲಿ 2 ಪ್ರಕರಣಗಳು, ಮೂಡಬಿದ್ರೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತವೆ.

Leave a Reply

Your email address will not be published. Required fields are marked *

error: Content is protected !!