1 ಲಕ್ಷ ರೂಪಾಯಿಗೆ ಒಂದು ಬಸ್: ಹಳೆಯ ಬಸ್‌ಗಳನ್ನು ಮಾರಾಟಕ್ಕಿಟ್ಟ ಬಿಎಂಟಿಸಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳು ಮಾರಾಟಕ್ಕಿವೆ. ಒಂದು ಲಕ್ಷ ರೂಪಾಯಿಗೆ ಒಂದು ಬಸ್! ಹೌದು, 7 ಲಕ್ಷ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹೆಚ್ಚುವರಿ ಬಸ್ ಗಳನ್ನು ಬಿಎಂಟಿಸಿಯು ಮಾರಾಟಕ್ಕಿಟ್ಟಿದೆ.
ಒಂದು ಬಸ್‌ಗೆ ಲಕ್ಷ ರೂ. ನಿಗದಿಪಡಿಸಿದೆ. ಆದರೆ, ಈ “ಆಫರ್’ ತನ್ನದೇ ಸಹೋದರ ಸಂಸ್ಥೆಯಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ ಡಬ್ಲ್ಯುಕೆಆರ್‌ಟಿಸಿ)ಕ್ಕೆ ಮಾತ್ರ ಅನ್ವಯ.
“ತನ್ನಲ್ಲಿರುವ ಹೆಚ್ಚುವರಿ ಬಸ್‌ಗಳನ್ನು ಬಿಎಂಟಿಸಿಯು ಎನ್‌ಡಬ್ಲ್ಯುಕೆಆರ್‌ಟಿಸಿಗೆ ನೀಡಲು ನಿರ್ಧರಿಸಿ, ಈ ಸಂಬಂಧ ನಿಗಮಕ್ಕೆ ಪ್ರಸ್ತಾವನೆ ನೀಡಿದೆ. ಹೀಗೆ ನೀಡುವ
ಹೆಚ್ಚುವರಿ ಬಸ್‌ಗಳಿಗೆ ಕನಿಷ್ಠ ಬೆಲೆ ಅಂದರೆ ಬಸ್‌ವೊಂದಕ್ಕೆ ಲಕ್ಷ ರೂ. ನಿಗದಿಪಡಿಸಿದೆ.