February 4, 2026

ಮಂಗಳೂರು: ಬಸ್‌ ನಿಲ್ದಾಣದಲ್ಲೇ ಪತಿಯನ್ನು ಬಿಟ್ಟು ಪತ್ನಿ ಪರಾರಿ

0
image_editor_output_image1385554255-1655785943385.jpg

ಮಂಗಳೂರು: ಬಸ್‌ ನಿಲ್ದಾಣದಲ್ಲೇ ಪತಿಯನ್ನು ಬಿಟ್ಟು ಪತ್ನಿ ಪರಾರಿಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಾರಿಯಾಗಿರುವ ಪತ್ನಿಯನ್ನು ಶಿಲ್ಪಾ (30) ಎಂದು ಗುರುತಿಸಲಾಗಿದ್ದು, ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದರು.

ಇನ್ನು ಬಸ್‌ ನಿಲ್ದಾಣದಲ್ಲಿ ಪಿಲಿಕುಳದ ಬಸ್‌ ಹತ್ತುವ ಮೊದಲು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಶಿಲ್ಪಾ ಹಿಂದಿರುಗಿ ಬರದಿದ್ದಾಗ ಪತಿ ಕೂಡಲೇ ಶಿಲ್ಪಾ ಅವರ ಮೊಬೈಲ್‌ಗೆ ಕರೆ ಮಾಡಿದರೂ, ಆಕೆ ಉತ್ತರಿಸಲಿಲ್ಲ. ಬಳಿಕ ಮೊಬೈಲ್‌ ಸ್ವಿಚ್ಡ್ ಆಫ್ ಆಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!