July 6, 2026

ಉಪ್ಪಿನಂಗಡಿ: ಟಿಪ್ಪರ್ ಲಾರಿ ಮತ್ತು ಆಕ್ಟಿವಾ ನಡುವೆ ಅಪಘಾತ: ಮಹಿಳೆ ಮೃತ್ಯು

0
accident.jpg

ಉಪ್ಪಿನಂಗಡಿ: ಟಿಪ್ಪರ್ ಲಾರಿ ಮತ್ತು ಆಕ್ಟಿವಾ ನಡುವೆ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನ ಸಹಸವಾರೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯ ಪೆರ್ನೆ ಸಮೀಪದ ಅಮೈಯಲ್ಲಿ ನಡೆದಿದ್ದು, ಡಿಕ್ಕಿ ಹೊಡೆದ ಟಿಪ್ಪರ್ ಲಾರಿಯ ಚಾಲಕ ಪರಾರಿಯಾಗಿದ್ದಾನೆ.

ಮೃತರನ್ನು ನೆಕ್ಕಿಲಾಡಿ ಬಾಲಕೃಷ್ಣ ಭಟ್ ರವರ ಪತ್ನಿ ಪೂರ್ಣಿಮಾ(45) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಭಟ್ ಮತ್ತು ಅವರ ಪತ್ನಿ ಪೂರ್ಣಿಮಾ ರವರು ಆಕ್ಟಿವಾದಲ್ಲಿ ತೆರಳುತ್ತಿದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ಪೂರ್ಣಿಮಾ ರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಡಿಕ್ಕಿ ಹೊಡೆದ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಸಾವನ್ನಪ್ಪಿದ ಮಹಿಳೆಯ ಪತಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!