February 2, 2026

ಕುಂಬಳೆ: ಎದೆಹಾಲು ಕುಡಿಯುವಾಗ ಮಗುವಿನ ಗಂಟಲಿನಲ್ಲಿ ಹಾಲು ಸಿಲುಕಿ ಮೃತ್ಯು

0
image_editor_output_image26247787-1655444728913.jpg

ಕುಂಬಳೆ: ಎದೆಹಾಲು ಕುಡಿಯುವಾಗ ಮಗುವಿನ ಗಂಟಲಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಧೂರಿನಲ್ಲಿ ನಡೆದಿದೆ.

ಮಧೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ನಿವಾಸಿ ಅಪ್ತಾಬ್‌ ಅವರ ಪುತ್ರಿ ಒಂದೂವರೆ ವರ್ಷದ ಇನಿಯ ಕಾರ್ತೋನ್‌ ಮಗು ಎದೆಹಾಲು ಗಂಟಲಲ್ಲಿ ಸಿಲುಕಿ ಸಾವಿಗೀಡಾಗಿದೆ.

ತಾಯಿ ಎದೆಹಾಲನ್ನು ಮಗುವಿಗೆ ಉಣಿಸುತ್ತಿರುವಾಗ ಹಾಲು ಗಂಟಲಲ್ಲಿ ಸಿಲುಕಿ ಮಗು ಒದ್ದಾಡಿದೆ. ತತ್‌ಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!