March 26, 2026

ಬಂಟ್ವಾಳ: ಅಕ್ರಮ ಗೋಮಾಂಸ ಅಡ್ಡೆಗೆ ಪೊಲೀಸರ ದಾಳಿ: 2 ಕಿಂಟ್ವಾಲ್ ಗೂ ಅಧಿಕ ದನದ ಮಾಂಸ ವಶಕ್ಕೆ

0
image_editor_output_image-1429422177-1655212554911.jpg

ಬಂಟ್ವಾಳ: ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದಕ್ಕೆ ಪುಂಜಾಲಕಟ್ಟೆ ಎಸ್.ಐ.ಸುತೇಶ್ ನೇತ್ರತ್ವದ ತಂಡ ದಾಳಿ ನಡೆಸಿ, ಮಾಂಸ ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಇಂದು ಮಧ್ಯಾಹ್ನ ವೇಳೆನಡೆದಿದೆ.
ಸುಮಾರು 2 ಕಿಂಟ್ವಾಲ್ ಗೂ ಅಧಿಕ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಪುತ್ತಿಲ ಗ್ರಾಮದಲ್ಲಿ ರುವ ಅರಣ್ಯ ಇಲಾಖೆಗೆ ಸೇರಿದ ದಟ್ಟ ಕಾಡಿನ ಮಧ್ಯೆ ಎರಡು ಶೆಡ್ ಗಳನ್ನು ಹಾಕಿ ಮಾಂಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಪೋಲೀಸರು ದಾಳಿ ನಡೆಸಿದ ವೇಳೆ ಮಾಂಸ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಮೂರರಿಂದ ನಾಲ್ಕು ಜನ ಆರೋಪಿಗಳು ದನ ಕಡಿದು ವ್ಯಾಪಾರ ವಹಿವಾಟು ‌ನಡೆಸುವ ಬಗ್ಗೆ ಪೋಲೀಸರಿಗೆ ಮಾಹಿತಿ ಇದ್ದು, ಆರೋಪಿಗಳ ಬಗ್ಗೆ ಸುಳಿವು ಕೂಡ ಇದೆ ಎನ್ನಲಾಗಿದೆ.

ಇದೊಂದು ದೊಡ್ಡ ಮಟ್ಟದ ಜಾಲವಾಗಿದ್ದು, ಕಾಡಿನ ಮಧ್ಯೆ ಯಾರು ಹೋಗದಂತಹ ಸ್ಥಳದಲ್ಲಿ ಅನೇಕ ವರ್ಷಗಳಿಂದ ಅಕ್ರಮದನ ಕಡಿಯುವ ಕೆಲಸಗಳು ನಡೆಯುತ್ತಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!