July 6, 2026

ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ: ಇಬ್ಬರು ಸಾವು, ನಾಲ್ವರು ಗಾಯ

0
Screenshot_2022-06-13-11-39-56-50_680d03679600f7af0b4c700c6b270fe7.jpg

ವಾಷಿಂಗ್ಟನ್: ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಅಮೆರಿಕದ ಇಂಡಿಯಾನಾ ನೈಟ್ ಕ್ಲಬ್ ನಲ್ಲಿ ಭಾನುವಾರ (ಜೂನ್ 12) ನಡೆದಿರುವುದಾಗಿ ವರದಿ ತಿಳಿಸಿದೆ.

ಆಗ್ನೇಯ ಚಿಕಾಗೋದ ಗ್ಯಾರಿಯಲ್ಲಿ ಭಾನುವಾರ 2ಗಂಟೆಗೆ ನಡೆದ ಶೂಟೌಟ್ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. 34 ವರ್ಷದ ವ್ಯಕ್ತಿಯ ಶವ ಪ್ಲೇಯೊಸ್ ನೈಟ್ ಕ್ಲಬ್ ಪ್ರವೇಶದ್ವಾರದ ಬಳಿ ಇತ್ತು. ನೈಟ್ ಕ್ಲಬ್ ಒಳಗೆ 26 ವರ್ಷದ ಯುವತಿಯ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೈಟ್ ಕ್ಲಬ್ ನಲ್ಲಿ ಇತರ ನಾಲ್ವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಶೂಟೌಟ್ ನಲ್ಲಿ ಸಾವನ್ನಪ್ಪಿರುವವರ ಹೆಸರು ಮತ್ತು ಘಟನೆ ಕುರಿತು ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ ಎಂದು ವರದಿ ಹೇಳಿದೆ.

Leave a Reply

Your email address will not be published. Required fields are marked *

You may have missed

error: Content is protected !!