ಚಿಕ್ಕಮಗಳೂರು ಮೂಲದ ಯೋಧನ ಮೃತದೇಹ ಬಿಹಾರದಲ್ಲಿ ಪತ್ತೆ
ಚಿಕ್ಕಮಗಳೂರು: ತಾಲ್ಲೂಕಿನ ಮಸಿಗದ್ದೆಯವರಾದ ಯೋಧ ಎಂ.ಎನ್ ಗಣೇಶ್ (36) ಅವರ ಮೃತದೇಹ ಬಿಹಾರದ ಕಿಶನ್‌ಗಂಜ್ ಪ್ರದೇಶದಲ್ಲಿ ಶನಿವಾರ ಪತ್ತೆಯಾಗಿದೆ.
ಗಣೇಶ್ ಅವರು ಅಸ್ಸಾಂನ ಗುವಾಹಟಿಯಲ್ಲಿ ಸೇನೆಯಲ್ಲಿ ಇದ್ದರು. ಅವರು ಏ.24ರಂದು ಊರಿಗೆ ಬಂದಿದ್ದರು. ಜೂನ್ 9ರಂದು ಊರಿನಿಂದ ತಿರುಗಿ ಹೋಗಿದ್ದರು.
ಗಣೇಶ್ ಅವರು ಮಸಿಗದ್ದೆಯ ಕೂಲಿಕಾರ ನಾಗಯ್ಯ ಮತ್ತು ಗಂಗಮ್ಮ ದಂಪತಿ ಪುತ್ರ. ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. 14 ವರ್ಷಗಳಿಂದ ಸೇನೆಯಲ್ಲಿ ಇದ್ದು, ರಾಜಸ್ತಾನ, ದೆಹಲಿ, ಗೋವಾ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸಿದ್ದರು. ವಿವಾಹವಾಗಿ ಆರು ವರ್ಷವಾಗಿದ್ದು, ಓರ್ವ ಪುತ್ರಿ ಇದ್ದಾರೆ.




